top of page
WhatsApp Image 2023-07-21 at 17.45_edite

ಸಂಪಾದಕೀಯ: ಡಾ.ಭಾಸ್ಕರ್

ವ್ಯಕ್ತಿ ಪರಿಚಯ: ಭಾಸ್ಕರಾಚಾರ್‌ರವರ ತಂದೆಯವರ ಊರು ಹಾಸನ ಜಿಲ್ಲೆಯ ಬಾಗೇಶ್‌ಪುರದ ನಂದಿಹಳ್ಳಿಯ ಚಂದ್ರಾಚಾರ್, ಎವರು ಕೆ.ಇ.ಬಿ ಯ ನೌಕರರಾಗಿದ್ದರಿಂದ ಕೆ.ಆರ್.ನಗರಕ್ಕೆ ಬಂದು ನೆಲೆಸಿದ್ದರು, ಭಾಸ್ಕರಾಚಾರ್ಯರ ವಿದ್ಯಾಭ್ಯಾಸವೆಲ್ಲವು ಕೆ.ಆರ್.ನಗರದಲ್ಲಿ ನಡೆಯಿತು.

2008ರಲ್ಲಿ ತಿಪಟೂರಿಗೆ ಬಂದ ಇವರು ಸ್ಥಳಿಯ ಬಿ.ಸಿ.ನಾಗೇಶ್‌(ಇಂದಿನ ಶಿಕ್ಷಣಮಂತ್ರಿ)ರವರ ಸಂಪರ್ಕಿತರಾದ ನಂತರ ಸಂಘದ ಕಾರ್ಯಕ್ರಮಗಳನ್ನು ಮುಂದುವರಿಸಿದರು.ಶಿವಮೊಗ್ಗದಲ್ಲಿ ತರಬೇತಿಯನ್ನು ಪಡೆದರು,ರವಿಂದ್ರ,ಸುಂದ್ರ,ನಾರೇಶ್‌,ಪ್ರಶಾಂತ್‌,ರಂತಹ ಸಂಘದ ಸಿಪಾಯಿಗಳೊಂದಿಗೆ ಸೇರಿ, ಗುರುಪೂಜೆ,ರಕ್ಷಾಭಂದನ,ಗಳಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನನುತಾವು ಶಿಸ್ತಿನಿಂದ ತೊಡಗಿಸಿಕೊಂಡು ಬರುತ್ತಿದ್ದಾರೆ.

ತಿಪಟೂರಿನ ಪರಿಸರಪ್ರೇಮಿ,ಪತ್ರಿಕೋದ್ಯಮಿ,ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅಲ್ಲದೆ ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿರುವ ಭಾಸ್ಕರ್(56) ಇಂದಿನ ಯುವ ಜನರಿಗೆ ದಾರಿದೀಪವಾಗಿದ್ದಾರೆ.

ಬಹಳಷ್ಟು ವರ್ಷಗಳ ಕಾಲ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮದಲ್ಲಿ ನೆಲೆಯೂರಿದ್ದ ಭಾಸ್ಕರ್‌ ಇದೀಗ ತಿಪಟೂರಿಗೆ ಸ್ಥಳಾಂತರಗೊಂಡಿದ್ದಾರೆ. ವಿದ್ಯುತ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಾಚಾರ್‌ ಮತ್ತು ಚನ್ನಮ್ಮ ದಂಪತಿಗಳ ಪುತ್ರ ಭಾಸ್ಕರ್‌ ತಮ್ಮ ಶಿಕ್ಷಣದ ನಂತರ ಆಯ್ಕೆಮಾಡಿಕೊಂಡಿದ್ದು ಪತ್ರಿಕೋದ್ಯಮ ಕ್ಷೇತ್ರ 25 ವರ್ಷಗಳ ಹಿಂದೆ ಭಾಸ್ಕರ್‌ ಪತ್ರಿಕೆ ಆರಂಭಿಸಿ ಸಮಾಜ ಕಟ್ಟುವ, ಸಮಾಜ ತಿದ್ದುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ "ಕರ್ನಾಟಕ ಅಕಾಡೆಮಿ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.

ಪತ್ರಿಕೋದ್ಯಮ ಇವರ ವೃತ್ತಿಯಾದರೂ, ಸಮಾಜಸೇವೆಯನ್ನು ಪ್ರವೃತ್ತಿಯಾಗಿಸಿಕೊಂದಿದ್ದಾರೆ

ಕಲ್ಪತರು ಜನವೇದಿಕೆಯಿಂದ ಸಾವಿರಾರು ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪರಿಸರ ಉಳಿಸುವ ನಿಟ್ಟಿನಲ್ಲಿ ಹೋರಾಡಿದ್ದಾರೆ. ಪ್ಲಾಸ್ಟಿಕ್‌ ನಿರ್ಮೂಚನ ಸಂಘದ ಅಧ್ಯಕ್ಷರಾಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಬಾಲಗಂಗಾಧರನಾಥ ಸ್ವಾಮಿಯವರ ಪರಿಸರ ಜಾಥಾದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಅಪ್ಪಿಕೊ ಚಳುವಳಿಯಲ್ಲಿ ಪಾಲ್ಗೊಂಡು ಹೋರಾಟದಲ್ಲಿ ಭಾಗವಹಿಸಿದ್ದಾರೆ. ಪರಿಸರ ಪ್ರೇಮಿಗಳಿಗೆ ಬೆಂಬಲವನ್ನು ವ್ಯಕ್ತಪಡಿಸಿ ಅಂತಹವರನ್ನು ಸನ್ಮಾನಿಸಿ, ಪ್ರೋತ್ಸಾಹ ನೀಡಿದ್ದಾರೆ. ನಾಡಿನ ಹಲವಾರು ಪತ್ರಿಕಡಗಳಲ್ಲಿ ಕಾರ್ಯ ನಿರ್ವಹಿಸಿ ತಮ್ಮ ಮೊನಾದ ಬರಹಗಳಿಂದ ಸಮಾಜದ ಕಣ್ಣು ತೆರೆಸಿದ್ದಾರೆ. ಅರಣ್ಯ ಎಲಾಖೆಯ ವತಿಯಿಂದ ಜನರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಇವರ ಸೇವೆಗೆ ಹಲವಾರು ಪ್ರಶಸ್ತಿ ಬಿರುದುಗಳು ಸಂದಿವೆ ಹಲವಾರು "ಪರಿಸರ ಪ್ರೇಮಿ" ಎಂಬ ಪ್ರಶಸ್ತಿ ನೀಡಿದೆ. "ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಟ್ರಸ್ಟ್"‌ ಬೆಂಗಳೂರು, ಇವರ ಪತ್ರಿಕೋದ್ಯಮ ಪರಿಸರ ರಕ್ಷಣೆಯ ಸೇವೆಯನ್ನು ಕಂಡು 10ನೇ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಹಾಗೂ ಕೆಂಪೆಗೌಡ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ "ವಿಶ್ವೇಶ್ವರಯ್ಯ ಪ್ರಶಸ್ತಿ" ನೀಡಿ ಗೌರವಿಸಿದೆ, ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಸಂಘ ತುಮಕೂರು "ಶ್ರೀ ವಿಶ್ವಕರ್ಮ ಸಹಕಾರಿ ಸದ್ಭಾವನಾ ಪ್ರಶಸ್ತಿ" ನೀಡಿ ಗೌರವಿಸಿದೆ, ಹಿರಿಯ ನಾಗರಿಕ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಕರ್ಮ ಪ್ರಶಸ್ತಿಯನ್ನು ಸ್ವತಃ ವಿಶ್ವಕರ್ಮ ಸಮಾಜದ ಶ್ರೀಗಳು ನೀಡಿರುವುದು ಇವರ ವ್ಯಕ್ತಿತ್ವವನ್ನು ಹೆಚ್ಚಿಸಿದೆ. "ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ" ಬಂದ ಹಿನ್ನೆಲೆಯಲ್ಲಿ ಇವರನ್ನು ದಾರಿದೀಪ ಸಾಪ್ತಾಹಿಕವು "ಕಾಯಕ ರತ್ನ" ಪ್ರಶಸಿ ನೀಡಿ 2012 ಅಕ್ಟೋಬರ್‌ 7 ರಂದು ಪಿರಿಯಾಪಟ್ಟಣದಲ್ಲಿ ಸನ್ಮಾನಿಸಿದೆ, ಹಾಗೆಯೇ ಇವರಿಗೆ ಗೌರವ ಡಾಕ್ಟರೇಟ್‌ ಲಭಿಸಿದೆ.

ಈಗ ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘ ತಿಪಟೂರು ಶಾಖೆಯಲ್ಲಿ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

 ಸಂದರ್ಶನ: ಸೂರಜ್‌ ಹಿರೇಮಠ

 

bottom of page